Ad imageAd image

ಶಾಹೀನ್ ಸಂಸ್ಥೆಗೆ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ ಗೌರವ

Kannada Bimba Team
3 Min Read
ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಸಮಾರಂಭದಲ್ಲಿ ಬೀದರಿನ ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರಿಗೆ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ , ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮತ್ತಿತರ ಗಣ್ಯರು ಇದ್ದರು.
ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಸಮಾರಂಭದಲ್ಲಿ ಬೀದರಿನ ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರಿಗೆ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ , ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮತ್ತಿತರ ಗಣ್ಯರು ಇದ್ದರು.

 

ಕನ್ನಡ ಬಿಂಬ, ಬೀದರ್

ಬೆಳಗಾವಿ ಸುವರ್ಣ ಸೌಧದಲ್ಲಿ ಮಂಗಳವಾರ ನಡೆದ ಭವ್ಯ ಸಮಾರಂಭದಲ್ಲಿ ಬೀದರಿನ ಶಾಹೀನ್  ಶಿಕ್ಷಣ ಸಂಸ್ಥೆಗಳ ಸಮೂಹಕ್ಕೆ ಪ್ರತಿಷ್ಠಿತ ಕರ್ನಾಟಕ  ಬಾಲ ವಿಕಾಸ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು ಅಕಾಡೆಮಿಯ ಪ್ರಶಸ್ತಿ ಸ್ವೀಕರಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶಸ್ತಿ ಪ್ರದಾನ ಮಾಡಿದರು. ಅಕಾಡೆಮಿ ಅಧ್ಯಕ್ಷ ಸಂಗಮೇಶ್ ಬಬಲೇಶ್ವರ್, ಇತರ ಪ್ರಶಸ್ತಿ ಪುರಸ್ಕøತರು, ಅಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.

ಶಾಲೆ ಬಿಟ್ಟ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುವ ಮೂಲಕ ಮುಖ್ಯವಾಹಿನಿಗೆ ತರಲು ಶೈಕ್ಷಣಿಕ ಐಸಿಯು ಎಂಬ ವಿಶೇಷ ಕಲಿಕಾ ವ್ಯವಸ್ಥೆಯನ್ನು ರೂಪಿಸಿರುವ ಶಾಹೀನ್ ಸಂಸ್ಥೆಯ ವಿಶಿಷ್ಟ ಕಾರ್ಯವನ್ನು ಗುರುತಿಸಿ, 2023-24 ನೇ ಸಾಲಿನ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಶಾಹೀನ್ ಸಂಸ್ಥೆಯು ಸುಮಾರು 15 ವರ್ಷಗಳಿಂದ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಮೇಲೆ ವಿಶೇಷ ನಿಗಾ ಇಡುವ ಅಕ್ಯಾಡೆಮಿಕ್  ಐಸಿಯು ಕಾರ್ಯಕ್ರಮ ನಡೆಸುತ್ತಿದೆ. ಪ್ರತಿ ವರ್ಷ ಸರಾಸರಿ 800 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆಯುತ್ತಾರೆ. ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಉಚಿತ ಶಿಕ್ಷಣ ನೀಡುತ್ತಿರುವುದು ಈ ಕಾರ್ಯಕ್ರಮದ ವಿಶೇಷ. 12 ರಿಂದ 20 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು.

ಯಾವುದೇ ತರಗತಿಯಿಂದ ಹೊರಗುಳಿದ ಯಾವುದೇ ವಿದ್ಯಾರ್ಥಿ ಈ ಕಾರ್ಯಕ್ರಮಕ್ಕೆ ಸೇರಬಹುದು. ಪ್ರವೇಶ ಪರೀಕ್ಷೆ ಇರುವುದಿಲ್ಲ. ಜೊತೆಗೆ ಪ್ರವೇಶಕ್ಕೆ ಸಮಯದ ನಿಗದಿ ಇಲ್ಲ. ವರ್ಷದ ಯಾವುದೇ ಸಮಯದಲ್ಲಿ ಪ್ರವೇಶ ಪಡೆಯಲು ಇಲ್ಲಿ ಅವಕಾಶ ಇದೆ. ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ, ವಿಶೇಷವಾಗಿ ಅವರು ದುರ್ಬಲರಾಗಿರುವ ವಿಷಯಗಳಲ್ಲಿ ಒಂದು ವರ್ಷದ ತೀವ್ರ ತರಬೇತಿಯನ್ನು ಪಡೆಯುತ್ತಾರೆ. ಕರ್ನಾಟಕದ ಹೊರಗಿನ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿಯೂ ತರಬೇತಿ ನೀಡುವ ವ್ಯವಸ್ಥೆ ಶಾಹೀನ್ ಸಂಸ್ಥೆಯಲ್ಲಿದೆ.

ತರಬೇತಿ ಮುಗಿದ ನಂತರ, ವಿದ್ಯಾರ್ಥಿಗಳ ವಯಸ್ಸು ಮತ್ತು ಕಲಿಕಾ ಸಾಮಥ್ರ್ಯದ ಆಧಾರದ ಮೇಲೆ ವಿವಿಧ ತರಗತಿಗಳಲ್ಲಿ ಪ್ರವೇಶ ನೀಡಲಾಗುತ್ತದೆ. ಮುಂದಿನ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಲಾಗುವುದು.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಈ ವಿದ್ಯಾರ್ಥಿಗಳು ಪಿಯುಸಿ ಸೇರಲು ಸಿದ್ಧರಾಗುತ್ತಾರೆ.

ಶಾಹೀನ್  ಶಿಕ್ಷಣ ಸಂಸ್ಥೆಯು ನಿಧಾನ ಕಲಿಯುವವರಿಗೆ ಮತ್ತು ಮದರಸಾ ಪದವೀಧರರಿಗೆ ಇನ್ನೆರಡು ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತದೆ. ಪಿಯುಸಿ ಅಧ್ಯಯನ ಮಾಡಲು ಕಷ್ಟಪಡುತ್ತಿರುವ ವಿದ್ಯಾರ್ಥಿಗಳಿಗಾಗಿ ಫೌಂಡೇಶನ್  ಕೋರ್ಸ್ ಇದೆ. ಮೂಲ ವಿಷಯಗಳಲ್ಲಿ, ವಿಶೇಷವಾಗಿ ಭಾμÉಗಳು ಮತ್ತು ಗಣಿತದಲ್ಲಿ ತರಬೇತಿ ನೀಡುವುದು  ಫೌಂಡೇಶನ್ ಕೋರ್ಸ್ ವಿಶೇಷತೆಯಾಗಿದೆ.

ಹಿಫ್ಜುಲ್  ಕುರಾನ್  ಪ್ಲಸ್  ಕೋರ್ಸ್  ನಲ್ಲಿ ಮದರಸಾ ಪದವೀಧರರಿಗೆ ವಿಜ್ಞಾನ, ಗಣಿತ ಮತ್ತು ಭಾμÉಗಳಂತಹ ಮುಖ್ಯವಾಹಿನಿಯ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತದೆ.  ಆರು ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರನ್ನು ನಿಯೋಜಿಸಲಾಗುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ನಿಧಾನ ಕಲಿಕೆ ಇರುವ ವಿದ್ಯಾರ್ಥಿಗಳು ಮತ್ತು ಮಧ್ಯದಲ್ಲಿ ಶಾಲೆ ಬಿಟ್ಟಿವರು ಹೀಗೆ ಎಲ್ಲರ ಮೇಲೆ ಸಮಾನ ಪ್ರಭಾವ ಬೀರುವುದು ಈ ಕೋರ್ಸ್ ನ ಮತ್ತೊಂದು ವಿಶೇಷತೆ.

ಬೀದರ ನಗರದಲ್ಲಿರುವ ಮುಖ್ಯ ಕ್ಯಾಂಪಸ್ ನಲ್ಲಿ ವಿವಿಧ ಕೋರ್ಸ್‍ ಗಳಲ್ಲಿ ಸುಮಾರು 10,000 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಇವರನ್ನು ಹೊರತುಪಡಿಸಿ ವಿಶೇಷ ವಿದ್ಯಾರ್ಥಿಗಳಿಗಾಗಿ ಮೂರು ಕಾರ್ಯಕ್ರಮಗಳು ಇದ್ದು, ಇಲ್ಲಿ ಒಟ್ಟು 7500 ವಿದ್ಯಾರ್ಥಿಗಳಿದ್ದಾರೆ. ಶಾಹೀನ್ ಸಂಸ್ಥೆಯು ರಾಜ್ಯ ಸರ್ಕಾರದ ಅಲ್ಪಸಂಖ್ಯಾತ ಇಲಾಖೆಯ ಸಹಯೋಗದೊಂದಿಗೆ ಈ ಕೋರ್ಸ್ ಅನ್ನು ನಡೆಸುತ್ತಿದೆ.

ದೇಶಾದ್ಯಂತದ ಮದರಸಾಗಳಿಂದ ಪದವೀಧರರಾದ ಸುಮಾರು 5,000 ವಿದ್ಯಾರ್ಥಿಗಳು ಹಿಫ್ಜುಲ್  ಕುರಾನ್  ಪ್ಲಸ್ ಕೋರ್ಸ್  ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಪ್ರಾಯೋಜಕತ್ವ ನೀಡಿದೆ.

Share This Article

You cannot copy content of this page