Ad imageAd image

ಜಿಎನ್ಡಿ ಸಂಸ್ಥೆ ಸಹಯೋಗದಲ್ಲಿ 19 ರಂದು ಯೋಗ ಮಹೋತ್ಸವ

Kannada Bimba Team
3 Min Read

 

 

ಕನ್ನಡ ಬಿಂಬ, ಬೀದರ್

12 ನೇ ಅಂತರರಾಷ್ಟ್ರೀಯ ಯೋಗ ದಿವಸವನ್ನು ಅರ್ಥಪೂರ್ಣವಾಗಿ ಆಚರಿಸಲು ಭಾರತ ಸರ್ಕಾರವು ಈ ವರ್ಷ ಆರೋಗ್ಯ, ಜ್ಞಾನ ಮತ್ತು ವಿಶ್ವಶಾಂತಿಗಾಗಿ ಯೋಗ ಎಂಬ ಧ್ಯೇಯವಾಕ್ಯದೊಂದಿಗೆ ದೇಶಾದ್ಯಂತ ನೂರು ಕಡೆ ಯೋಗ ಮಹೋತ್ಸವ ಕಾರ್ಯಕ್ರಮ ಆಯೋಜಿಸುವುದರ ಮೂಲಕ ಯೋಗದ ಪ್ರಚಾರ ಪ್ರಸಾರ ಮಾಡುತ್ತಿದೆ ಎಂದು ದೆಹಲಿಯ ಯೋಗ ಸರ್ಟಿಫೀಕೆಶನ್ ಬೋರ್ಡನ ಸದಸ್ಯರು ಹಾಗೂ ಐ.ಎನ್.ಓ ರಾಷ್ಟ್ರೀಯ ಅದ್ಯಕ್ಷರಾದ ಅನಂತ ಬಿರಾದಾರ ಅವರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ದಿ. 19 ಭಾನುವಾರ ಬೆಳಿಗ್ಗೆ 5:30 ಕ್ಕೆ ಬೀದರ ನಗರದ ಗುರುನಾನಕ್ ದೇವ ಇಂಜಿನಿಯರಿÀಗ್ ಕಾಲೇಜಿನ ಮೈದಾನದಲ್ಲಿ ಭಾರತ ಸರ್ಕಾರದ ಆಯುಷ್ ಇಲಾಖೆಯ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ, ಅಂತರರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ, ಸೂರ್ಯ ಫೌಂಡೇಶನ್ ನೇತೃತ್ವದಲ್ಲಿ ಗುರುನಾನಕ್ ಗ್ರೂಪ್ ಆಫ್ ಇನ್ಸಟಿಟ್ಯೂಟ್ಸ್ ಬೀದರ ಇವರ ಸಹಯೋಗದೊಂದಿಗೆ ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಭವ್ಯವಾದ ಯೋಗ ಮಹೋತ್ಸವವನ್ನು ಆಯೋಜಿಸಲಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಗ ಮಹೋತ್ಸವದಲ್ಲಿ ಭಾಗವಹಿಸಿ ಜೀವನವನ್ನು ಆರೋಗ್ಯಕರ, ಶಾಂತಿಯುತ ಮತ್ತು ಶಕ್ತಿಯುತವಾಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಅಂತಾರಾಷ್ಟ್ರೀಯ ಪ್ರಾಕೃತಿಕ ಚಿಕಿತ್ಸಾ ಸಂಸ್ಥೆ ಹಾಗೂ ಸೂರ್ಯ ಫೌಂಡೇಶನ್ ದೇಶ ವಿದೇಶಗಳಲ್ಲಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಪ್ರಾಕೃತಿಕ ಚಿಕಿತ್ಸೆ ಮತ್ತು ಯೋಗದ ಪ್ರಚಾರ ಪ್ರಸಾರಕ್ಕಾಗಿಯೆ ಪದ್ಮಶ್ರೀ ಜಯಪ್ರಕಾಶ ಅಗ್ರವಾಲ್ ಅವರ ಮಾರ್ಗದರ್ಶನದಲ್ಲಿ ಸೇವೆಗೈಯುತ್ತಿದ್ದು ಬೀದರನಲ್ಲಿ ನಡೆಯುವ ಯೋಗ ಮಹೋತ್ಸವದಲ್ಲಿ ಯೋಗದ ವಿವಿಧ ಆಯಾಮಗಳು ಮತ್ತು ಅದರ ಉಪಯುಕ್ತತೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಲಾಗುವುದು ವಿಶೇಷವಾಗಿ ಯೋಗ ಮಹೋತ್ಸವ ಕಾರ್ಯಕ್ರಮದಲ್ಲಿ ತಾಡಸನ (ಪರ್ವತ ಭಂಗಿ) ಆಸನದ ಮೇಲೆ ಏಶಿಯಾ ಬುಕ್ ಆಫ್ ರೇಕಾರ್ಡ್ ಮಾಡಲಾಗುತ್ತಿದೆ ಮತ್ತು ಭಾಗವಹಿಸಿದ ಪ್ರತಿಯೊಬ್ಬರಿಗೂ ಭಾರತ ಸರ್ಕಾರದ ಆಯುಶ್ ಇಲಾಖೆ ವತಿಯಿಂದ ಇ-ಪ್ರಮಾಣಪತ್ರ ಕೂಡ ದೊರಕಲಿದೆ ಎಂದು  ಬಿರಾದಾರ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿದಂಬರಾಶ್ರಮದ ಡಾ.ಶಿವಕುಮಾರ ಮಹಾಸ್ವಾಮಿಗಳು, ಹಿರೇಮಠ ಸಂಸ್ಥಾನ ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಪ್ರಜಾಪಿತ ಬ್ರಹ್ಮಕುಮಾರಿ ಪ್ರತಿಮಾ ಬೆಹನಜಿ, ಭಾರತ ಸರ್ಕಾರದ ಆಯುಶ್ ಇಲಾಖೆಯ ಸಚಿವರಾದ ಪ್ರತಾಪರಾವ ಜಾಧವ, ಆಯುರ್ವೇದ ಬೋರ್ಡ್ ಅದ್ಯಕ್ಷರಾದ ಡಾ.ಅಲ್ಲಮಪ್ರಭು ಗುಡ್ಡ, ಪತಂಜಲಿ ಯೋಗಪೀಠ ಹರಿದ್ವಾರ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ, ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಗುರುನಾನಕ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾ.ಸರ್ದಾರ್ ಬಲಬೀರಸಿಂಗ್, ಡಾ.ರೇಶ್ಮಾ ಕೌರ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.

ಗುರುನಾನಕ್ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಪವಿತ್ ಸಿಂಗ್  ಮಾತನಾಡಿ ಮನುಷ್ಯನ ಮಾನಸಿಕ ದೈಹಿಕ ಆಧ್ಯಾತ್ಮಿಕ ಹಿತಕ್ಕಾಗಿ ಯೋಗ ಅತ್ಯವಶ್ಯಕ ಈ ನಿಟ್ಟಿನಲ್ಲಿ ಸೂರ್ಯ ಫೌಂಡೇಶನ್ ಹಾಗೂ ಐ.ಎನ್.ಓ ದೇಶಾದ್ಯಂತ ಉತ್ತಮ ಕೆಲಸ ಮಾಡುತಿದ್ದು ಆಯುಶ್ ಇಲಾಖೆ ಅಡಿಯಲ್ಲಿ ಹಮ್ಮಿಕೊಂಡ ಭವ್ಯವಾದ ಯೋಗ ಮಹೋತ್ಸವ ಕಾರ್ಯಕ್ರಮಕ್ಕೆ ಗುರುನಾನಕ ಶಿಕ್ಷಣ ಸಂಸ್ಥೆಯು ಆದ್ಯ ಕರ್ತವ್ಯವೆಂದು ಭಾವಿಸಿ ಸಂಪೂರ್ಣವಾಗಿ ಕಾರ್ಯಕ್ರಮದ ಯಶಸ್ಸಿಗಾಗಿ ಸಹಕರಿಸುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಯೋಗಾಸಕ್ತರು ಭಾಗವಹಿಸಬೇಕೆಂದು ವಿನಂತಿಸಿದರು.

2026 ರ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಫಲತೆಗಾಗಿ ಆಯುಶ್ ಇಲಾಖೆಯು ಅಂತರ ಸಚಿವಾಲಯ ಸಮಿತಿ ರಚಿಸಿದ್ದು ಅದರ ಸದಸ್ಯರಾಗಿ ಅನಂತ ಬಿರಾದಾರ ಅವರು ನೇಮಕಗೊಂಡಿದ್ದು ಇವರ ಮುಂದಾಳತ್ವದಲ್ಲಿಯೆ ಜಿಲ್ಲೆಯಲ್ಲಿ ಈ ಯೋಗ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು ಸೂಮಾರು ಹತ್ತು ಸಾವಿರ ಜನ ಯೋಗಾಸಕ್ತರು ಭಾಗವಹಿಸುವ ನಿರಿಕ್ಷೆಯಿದ್ದು ಬೇಕಾದ ಸಿದ್ದತೆ ಮಾಡಿಕೊಳ್ಳಲಾಗಿದೆ ಕಾರ್ಯಕ್ರಮದ ಬಳಿಕ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಹಾಗೂ ಪದ್ಮಶ್ರೀ ಜಯಪ್ರಕಾಶ ಅಗ್ರವಾಲ ಅವರ ಅಮೃತ ಮಹೋತ್ಸವದ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಸಸಿ ನೆಡುವ ಕಾರ್ಯಕ್ರಮ ಕೂಡ ನಡೆಯಲಿದೆ ಎಂದು ಸೂರ್ಯ ಫೌಂಡೇಶನ್ ಹಾಗೂ ಐ.ಎನ್.ಓ ರಾಜ್ಯ ಸಂಚಾಲಕ ಗುರುನಾಥ ರಾಜಗೀರಾ ತಿಳಿಸಿದರು.

ಈ ಸಂದರ್ಭದಲ್ಲಿ ಐ.ಎನ್.ಓ ರಾಷ್ಟ್ರೀಯ ಸಹ ಕಾರ್ಯದರ್ಶಿ ತ್ರೀಭುವನ ಸಿಂಗ್, ರಾಜ್ಯ ಕಾರ್ಯದರ್ಶಿ ಯೋಗೆಂದ್ರ ಯದಲಾಪುರೆ, ಜಿಲ್ಲಾದ್ಯಕ್ಷರಾದ ಗೋರಖನಾಥ ಕುಂಬಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಪಾಟೀಲ, ಜಿಲ್ಲಾ ಸಂಚಾಲಕಿ ಡಾ.ಮಂಜುಳಾ ಮುಚಳಂಬೆ, ಜಿಲ್ಲಾ ಉಪಾದ್ಯಕ್ಷರಾದ ಜಗದೀಶ ಮುಖೇಡಕರ್, ರೂಪಾ ಪಾಟೀಲ ಉಪಸ್ಥಿತರಿದ್ದರು.

Share This Article

You cannot copy content of this page