Ad imageAd image

ನ. 11 ರಂದು ನಾರಂಜಾ ಕ್ರಷಿಂಗ್ ಆರಂಭ

Kannada Bimba Team
1 Min Read
ನಾರಂಜಾ ಸಹಕಾರಿ ಸಕ್ಕರೆ ಕಾರಖಾನೆಯ ಅಧ್ಯಕ್ಷರಾದ ಸೂರ್ಯಕಾಂತ ನಾಗಮಾರಪಳ್ಳಿ ಅವರು ಬಾಯ್ಲರ್ ಪೂಜೆ ನೆರವೇರಿಸಿದರು. ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಉಮಾಕಾಂತ ನಾಗಮರಪಳ್ಳಿ ಕಾರಖಾನೆಯ ನಿರ್ದೇಶಕರು, ಗಣ್ಯರು ಇದ್ದರು.

ಕನ್ನಡ ಬಿಂಬ, ಬೀದರ್

 

ಬೀದರ್: ನಾರಂಜಾ ಸಹಕಾರಿ ಸಕ್ಕರೆ ಕಾರಖಾನೆಯು ಈ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಕಾರಖಾನೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು ಬಾಯ್ಲರ್ ಪೂಜೆ ನೆರವೇರಿಸಿದರು. ನ. 11 ರಂದು ಈ ಹಂಗಾಮಿನ  ಕಬ್ಬು ನುರಿಸುವ ಕಾರ್ಯ ಆರಂಭವಾಗಲಿದೆ.

ಜಿಲ್ಲೆಯ ಕಬ್ಬು ಬೆಳೆಗಾರರ ಹಿತ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಹಂಗಾಮು ಆರಂಭಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಎಲ್ಲ ಸದಸ್ಯ ರೈತರು ಕಾರಖಾನೆಗೆ ಕಬ್ಬು ಪೂರೈಕೆ ಮಾಡಿ ಸಹಕರಿಸಬೇಕು. ಬೇರೆ ರಾಜ್ಯಕ್ಕೆ ಕಬ್ಬು ಸಾಗಾಣಿಕೆ ಮಾಡಬಾರದು ಎಂದು ಸೂರ್ಯಕಾಂತ ನಾಗಮಾರಪಳ್ಳಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾರಖಾನೆಯ ಉಪಾಧ್ಯಕ್ಷ ಬಾಲಾಜಿ ಚಹ್ವಾಣ್, ನಿರ್ದೇಶಕರಾದ ರಾಜಕುಮಾರ  ಕರಂಜೆ, ಸಿದ್ರಾಮ ವಾಘಮಾರೆ, ಸಂಗಮೇಶ ಪಾಟೀಲ್, ವಿಜಯಕುಮಾರ ಪಾಟೀಲ್, ಸಂಜುಕುಮಾರ ಸಿದ್ದಾಪುರ, ಚಂದ್ರಕಾಂತ ಹಿಪ್ಪಳಗಾಂವ್, ಕುಶಾಲರಾವ್ ಯಾಬಾ, ಅಮರೇಶ ಗಂಗಪ್ಪ ನಾಗಮಾರಪಳ್ಳಿ, ಮಲ್ಲಮ್ಮ ಕಾಶಿನಾಥ ಪಾಟೀಲ್, ಶೊಭಾವತಿ ಶಂಕರೆಪ್ಪ ಪಾಟೀಲ್,  ಗಣ್ಯರಾದ ಬಸವರಾಜ ಹೆಬ್ಬಾಳೆ, ರಘುನಾಥ ಬಿರಾದಾರ್, ಸಿದ್ದಯ್ಯ ಸ್ವಾಮಿ, ಮಹಾದೇವ ಬಿರಾದಾರ್ ಅಲಿಯಂಬರ್, ಸಿದ್ದು ಲವಟೆ,  ಶಾಂತಲಿಂಗ ಸಾವಳಗಿ, ಶಿವಕುಮಾರ ಬಿರಾದಾರ್ ಸಂಗಮ್, ನಂದಕುಮಾರ ಜೋಶಿ, ಭೀಮರಾವ ಪಾಟೀಲ್  ಡಿಗ್ಗಿ, ಕಲ್ಲಪ್ಪ ದಾನಾ, ಶಿವಕುಮಾರ ಭಾಲ್ಕೆ, ಬಾಲಾಜಿರೆಡ್ಡಿ, ಗುಂಡಯ್ಯ ಸ್ವಾಮಿ, ದತ್ತು ಅಣದೂರವಾಡಿ, ಕಾರಖಾನೆಯ ಅಧಿಕಾರಿ-ಸಿಬ್ಬಂದಿ ವರ್ಗ, ಮತ್ತಿತರರು ಉಪಸ್ಥಿತರಿದ್ದರು.

Share This Article

You cannot copy content of this page