Ad imageAd image

ಈ ಜಿಲ್ಲೆಯಲ್ಲಿ ರಾಷ್ಟ, ರಾಜ್ಯ ಮಟ್ಟದ ಒಬ್ಬ ಕ್ರೀಡಾಪುಟುವೂ ಇಲ್ಲ..

Kannada Bimba Team
3 Min Read

 

ಮಾರುತಿ ಸೋನಾರ್, ಬೀದರ್

ಶಾಲಾ ತರಗತಿಯ ಜೊತೆಗೆ ಆಟದ ಮೈದಾನದಲ್ಲೂ ಬೀದರ್ ಜಿಲ್ಲೆ ಹಿಂದಿದೆ. ಬಹುತೇಕ ಕ್ಷೇತ್ರಗಳಂತೆ ಕ್ರೀಡಾ ಕ್ಷೇತ್ರದಲ್ಲೂ ಈ ಜಿಲ್ಲೆಯ ಸಾಧನೆ ನಿರಾಶಾದಾಯಕವಾಗಿದೆ.  ಅಂತಾರಾಷ್ಟಿçÃಯ ಮಟ್ಟದ, ರಾಷ್ಟçಮಟ್ಟದ ಒಬ್ಬನೇ ಒಬ್ಬ ಕ್ರೀಡಾಪಟುವೂ ಬೀದರ್ ಜಿಲ್ಲೆಯಲ್ಲಿ ಇಲ್ಲ. ರಾಜ್ಯ ಮಟ್ಟದ ಕ್ರೀಡಾಪಟುಗಳು ಸಹ ಇಲ್ಲ. ತಾಲೂಕು ಮಟ್ಟದ  34 ಕ್ರೀಡಾಪಟುಗಳಷ್ಟೇ ಈ ಜಿಲ್ಲೆಯಲ್ಲಿದ್ದಾರೆ.

ಹುಮನಾಬಾದ್ ತಾಲೂಕಿನಲ್ಲಿ  31 ಕ್ರೀಡಾಪಟುಗಳಿದ್ದಾರೆ. ಬೀದರ್ ತಾಲೂಕಿನಲ್ಲಿ  16 ಕ್ರೀಡಾಪಟುಗಳಿದ್ದಾರೆ. ಇವರೆಲ್ಲರೂ ತಾಲೂಕು ಮಟ್ಟದ ಕ್ರೀಡಾಪಟುಗಳು ಎನ್ನುವುದನ್ನು ಗಮನಿಸಬೇಕು. ಜಿಲ್ಲೆಯಲ್ಲಿರುವ ಹೆಚ್ಚಿನ ಶಾಲೆಗಳಲ್ಲಿ ಆಟದ ಮೈದಾನಗಳೇ ಇಲ್ಲ.

ಕೆಲ ಖಾಸಗಿ  ಶಾಲಾ ಕಾಲೇಜುಗಳು ಜೆಇಇ, ಸಿಇಟಿ, ನೀಟ್ ನಲ್ಲಿ ಉತ್ತಮ ಫಲಿತಾಂಶ ಪಡೆದು ರಾಜ್ಯದ ಗಮನ ಸೆಳೆಯುತ್ತಿವೆ. ಆದರೆ, ಕ್ರೀಡೆ ಮಾತ್ರ ಆದ್ಯತೆಯ ವಿಷಯ ಆಗುತ್ತಿಲ್ಲ. ಕ್ರೀಡಾಪಟುಗಳೂ ರೂಪುಗೊಳ್ಳುತ್ತಿಲ್ಲ.

ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಲಿಖಿತ ಉತ್ತರದಲ್ಲಿ ಅಚ್ಚರಿಪಡಬಹುದಾದ ಹಲವು ಸಂಗತಿಗಳಿವೆ. ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಕಲಬುರಗಿ ಜಿಲ್ಲೆಯಲ್ಲಿ  ಅಂತರಾಷ್ಟಿçÃಯ ಮತ್ತು ರಾಷ್ಟç ಮಟ್ಟದ ಒಬ್ಬ ಕೀಡಾಪಟುವೂ ಇಲ್ಲ. ರಾಜ್ಯಮಟ್ಟದ 317 ಕ್ರೀಡಾಪಟುಗಳಿದ್ದಾರೆ. ತಾಲೂಕು ಮಟ್ಟದ 2560 ಕ್ರೀಡಾಪಟುಗಳು ಈ ಜಿಲ್ಲೆಯಲ್ಲಿದ್ದಾರೆ. ರಾಜ್ಯ ಮಟ್ಟದ ಕ್ರೀಡಾಪಟುಗಳಲ್ಲಿ ಅಥ್ಲೇಟಿಕ್ಸ್, ಕರಾಟೆ, ಈಜು, ಹ್ಯಾಂಡ್‌ಬಾಲ್, ಕಬಡ್ಡಿ, ಕ್ರಿಕೆಟ್, ಜೂಡೋ ಕ್ರೀಡಾಪಟುಗಳು ಸೇರಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಅಂತಾರಾಷ್ಟಿಯ ಮಟ್ಟದ ಕ್ರೀಡಾಪಟುಗಳಿಲ್ಲ. ಆದರೆ, ರಾಷ್ಟಮಟ್ಟದ  24 ಕ್ರೀಡಾಪಟುಗಳಿದ್ದಾರೆ. ರಾಜ್ಯ ಮಟ್ಟದ 131 ಕ್ರೀಡಾಪಟುಗಳೂ ಈ ಜಿಲ್ಲೆಯಲ್ಲಿದ್ದಾರೆ. ಹಾಕಿ ಆಟಗಾರರ ಸಂಖ್ಯೆ ಹೆಚ್ಚಿರುವುದು ವಿಶೇಷ. 13 ಜನ ರಾಷ್ಟ ಮತ್ತು 36 ಮಂದಿ ರಾಜ್ಯ ಮಟ್ಟದ ಹಾಕಿ ಆಟಗಾರರು ಇದ್ದಾರೆ. ಫುಟ್‌ಬಾಲ್, ಕಬಡ್ಡಿ, ಕುಸ್ತಿ, ಊಶೋ, ಬಾಸ್ಕೇಟ್‌ಬಾಲ್ ಕ್ರೀಡಾಪಟುಗಳೂ ಇದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ  ಅಂತಾರಾಷ್ಟಿಯ ಕ್ರೀಡಾಪಟುಗಳಿಲ್ಲ. ರಾಷ್ಟಮಟ್ಟದ 64 ಕ್ರೀಡಾಪಟುಗಳಿದ್ದಾರೆ. ಇವರಲ್ಲಿ ಹೆಚ್ಚಿನವರು ವಾಲಿಬಾಲ್, ಹ್ಯಾಂಡ್‌ಬಾಲ್  ಆಟಗಾರರು. ರಾಜ್ಯ ಮಟ್ಟದ 457 ಕ್ರೀಡಾಪಟುಗಳಿದ್ದಾರೆ. ಈ ಪೈಕಿ ಅರ್ಧದಷ್ಟು ಅಥ್ಲೇಟಿಕ್ಸ್. ವಾಲಿಬಾಲ್, ಖೋ ಖೋ,  ಕಬಡ್ಡಿ, ಶಟಲ್  ಬ್ಯಾಡ್ಮಿಂಟನ್  ಆಟಗಾರರೂ ಈ ಜಿಲ್ಲೆಯಲ್ಲಿದ್ದಾರೆ.

ವಿಜಯನಗರ ಜಿಲ್ಲೆಯಲ್ಲಿ ಅಂತಾರಾಷ್ಟಿಯ ಕ್ರೀಡಾಪಟುಗಳಿಲ್ಲ. ಊಶೋ ಕ್ರೀಡೆಯಲ್ಲಿ ಹೆಸರು ಮಾಡಿರುವ ಒಬ್ಬ ರಾಷ್ಟ ಮಟ್ಟದ ಕ್ರೀಡಾಪಟು ಇದ್ದಾರೆ. ಇನ್ನುಳಿದಂತೆ ರಾಜ್ಯ ಮಟ್ಟದ 72 ಕ್ರೀಡಾಪಟುಗಳಿದ್ದಾರೆ. ವಾಲಿಬಾಲ್, ಹ್ಯಾಂಡಬಾಲ್,  ಊಶೋ ಆಟಗಾರರ ಸಂಖ್ಯೆ ಹೆಚ್ಚಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಲಿಖಿತ ಮಾಹಿತಿ ಪ್ರಕಾರ ಆಟದ ಮೈದಾನದಲ್ಲಿ ಬೀದರ್ ಮತ್ತು ರಾಯಚೂರು ಜಿಲ್ಲೆಗಳ ಸ್ಥಿತಿ ಏಕಪ್ರಕಾರವಾಗಿದೆ. ಈ ಜಿಲ್ಲೆಯಲ್ಲಿ ಅಂತಾರಾಷ್ಟಿಯ, ರಾಷ್ಟç ಮತ್ತು ರಾಜ್ಯ ಮಟ್ಟದ ಕ್ರೀಡಾಪುಗಳು ಇಲ್ಲ. ತಾಲೂಕು ಮಟ್ಟದ 82 ಕ್ರೀಡಾಪಟುಗಳಿದ್ದಾರೆ. ಜಿಮ್ನಾಸ್ಟಿಕ್ಸ್, ಅಥ್ಲೇಟಿಕ್ಸ್, ಖೋಖೋ ಆಟಗಾರರಿದ್ದಾರೆ. ಮೂವರು ಪೈಲವಾನರೂ ಇದ್ದಾರೆ.

ಕ್ರೀಡಾಪಟುಗಳಿಗೆ ಉನ್ನತಮಟ್ಟದ ತರಬೇತಿ ಮತ್ತಿತರ ಸವಲತ್ತುಗಳನ್ನು ಒದಗಿಸಲು ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಉನ್ನತ ಮಟ್ಟದ ಕ್ರೀಡಾ ತರಬೇತಿ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿತ್ತು. ಇದಕ್ಕೆ 50 ಎಕರೆ ಜಮೀನು ಬೇಕಿತ್ತು. ಆದರೆ, ವಿಶ್ವವಿದ್ಯಾಲಯದಲ್ಲಿ ಜಮೀನು ಲಭ್ಯವಿಲ್ಲವೆಂದು ಕುಲಸಚಿವರು ಕಳೆದ ಸಾಲಿನ ಮಾರ್ಚ್ನಲ್ಲಿ ಸರಕಾರಕ್ಕೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ವಿವಿ ಆವರಣದ ಬದಲು ಹಡಿಗಲ್ ಹಾರುತಿ ಗ್ರಾಮದ ಬಳಿ ಒಟ್ಟು 30 ಎಕರೆ  ಗೋಮಾಳ ಜಮೀನನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಮಂಜೂರು ಮಾಡಲಾಗಿದೆ.

ಕ್ರೀಡಾಪಟುಗಳ ಉತ್ತೇಜನಕ್ಕೆ ಸರಕಾರ ಹಲವು ಕ್ರಮ ಕೈಗೊಂಡಿದೆ. ಹಲವು ಯೋಜನೆಗಳೂ ಇವೆ ಎಂದು ಮುಖ್ಯಮಂತ್ರಿಯವರು ಮಾಹಿತಿ ನೀಡಿದ್ದಾರೆ. ಬೆಳಗಾವಿ, ದಾವಣಗೇರೆ, ಹಳಿಯಾಳ, ಗದಗ, ಧಾರವಾಡ ಜಿಲ್ಲೆಗಳ ಕ್ರೀಡಾ ವಸತಿ ನಿಲಯಗಳಲ್ಲಿ ಕುಸ್ತಿ ಕ್ರೀಡೆಯಲ್ಲಿ ಯುವ ಕುಸ್ತಿಪಟುಗಳಿಗೆ ವೈಜ್ಞಾನಿಕ ತರಬೇತಿ ನೀಡಲಾಗುತ್ತಿದೆ. ಮಂಡ್ಯ ಮತ್ತು ದಾವಣಗೇರೆ ಕ್ರೀಡಾ ವಸತಿನಿಲಯಗಳಲ್ಲಿ ಕಬಡ್ಡಿ ತರಬೇತಿ ನೀಡಲಾಗುತ್ತಿದೆ.

ಗ್ರಾಮೀಣ ಕ್ರೀಡೆಗಳಲ್ಲಿನ ಸಾಧಕರನ್ನು ಪ್ರೋತ್ಸಾಹಿಸುವುದಕ್ಕಾಗಿ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಿ ಗೌರವಿಸಲಾಗುತ್ತಿದೆ. ರಾಜ್ಯ ಮಟ್ಟದ ಮಾಜಿ ಕುಸ್ತಿ ಪೈಲವಾನರಿಗೆ ಮಾಸಿಕ 4500 ರೂ., ರಾಷ್ಟç ಮಟ್ಟದ ಪೈಲವಾನರಿಗೆ 5,000 ಮತ್ತು ಅಂತಾರಾಷ್ಟಿçÃಯ ಮಟ್ಟದ ಪೈಲವಾನರಿಗೆ 6000 ರೂ. ಮಾಸಾಶಾನ ಕೊಡಲಾಗುತ್ತಿದೆ.

ಕುಸ್ತಿಯೇತರ  ಮಾಜಿ ಕ್ರೀಡಾಪಟುಗಳಿಗೆ ರಾಜ್ಯ ಮಟ್ಟದಲ್ಲಿ ರೂ.2000, ರಾಷ್ಟç ಮಟ್ಟದಲ್ಲಿ 2,500 ಮತ್ತು ಅಂತಾರಾಷ್ಟಿçÃಯ ಮಟ್ಟದಲ್ಲಿ 3000 ರೂ.ಮಾಸಾಶನ ನೀಡಲಾಗುತ್ತಿದೆ. ಇದರ ಜೊತೆಗೆ ಪ್ರತಿ ವರ್ಷ ದಸರಾ ಉತ್ಸವದಲ್ಲಿ ರಾಜ್ಯ ಮಟ್ಟದ ಸ್ಪರ್ಧೆ ಆಯೋಜಿಲಾಗುತ್ತಿದೆ.  ಗ್ರಾಮೀಣ ಗರಡಿ ಮನೆ ನಿರ್ಮಾಣಕ್ಕೆ ಗರಿಷ್ಠ ರೂ. 10 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ.  ಕುಸ್ತಿ ಕ್ರೀಡೆಯನ್ನು ಉತ್ತೇಜಿಸಲು ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಯವರು ಮಾಹಿತಿ ನೀಡಿದ್ದಾರೆ.

TAGGED:
Share This Article

You cannot copy content of this page