Ad imageAd image

ಹಿಂದುತ್ವ ಆತ್ಮವಿಕಾಸದ ಪಥ: ರಘುನಂದನ್

Kannada Bimba Team
2 Min Read
ಬೀದರ್ ನಗರದ ಸರಸ್ವತಿ ಶಾಲೆಯಲ್ಲಿ `ಹಿಂದುತ್ವ ಆತ್ಮವಿಕಾಸದಿಂದ ಜಗತ್ ಕಲ್ಯಾಣದವರೆಗೆ' ಶೀರ್ಷಿಕೆಯ ವಿಶೇಷ ಉಪನ್ಯಾಸ ಮಾಲೆ ನಡೆಯಿತು. ರಘುನಂದನ್ ಬೋಗದಿ, ಎನ್. ಕೃಷ್ಣಾರೆಡ್ಡಿ ಮತ್ತಿತರ ಗಣ್ಯರಿದ್ದರು.
ಬೀದರ್ ನಗರದ ಸರಸ್ವತಿ ಶಾಲೆಯಲ್ಲಿ `ಹಿಂದುತ್ವ ಆತ್ಮವಿಕಾಸದಿಂದ ಜಗತ್ ಕಲ್ಯಾಣದವರೆಗೆ’ ಶೀರ್ಷಿಕೆಯ ವಿಶೇಷ ಉಪನ್ಯಾಸ ಮಾಲೆ ನಡೆಯಿತು. ರಘುನಂದನ್ ಬೋಗದಿ, ಎನ್. ಕೃಷ್ಣಾರೆಡ್ಡಿ ಮತ್ತಿತರ ಗಣ್ಯರಿದ್ದರು.

 

ಕನ್ನಡ ಬಿಂಬ, ಬೀದರ್

ಕೇಶವ ಕಾರ್ಯ ಸಂವರ್ಧನ ಸಮಿತಿ ಮತ್ತು ಸರಸ್ವತಿ ಶಿಕ್ಷಣ ವಿಕಾಸ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಬೀದರ್ ನಗರದ ಸರಸ್ವತಿ ಶಾಲೆ ಆವರಣದಲ್ಲಿ ಮೂರು ದಿನಗಳ ಕಾಲ `ಹಿಂದುತ್ವ ಆತ್ಮವಿಕಾಸದಿಂದ ಜಗತ್ ಕಲ್ಯಾಣದವರೆಗೆ’  ಶೀರ್ಷಿಕೆಯ ವಿಶೇಷ ಉಪನ್ಯಾಸ ಮಾಲೆ ನಡೆಯಿತು. ಸಮಾಜ ಚಿಂತನೆ, ಸಂಸ್ಕøತಿ ಅರಿವು ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಸಂಬಂಧಿಸಿದ ಅಂಶಗಳನ್ನು ಈ ಸಂದರ್ಭದಲ್ಲಿ ವಿಶ್ಲೇಷಿಸಲಾಯಿತು.

ಉಪನ್ಯಾಸಕರಾಗಿ ಆಗಮಿಸಿದ್ದ ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಹಸಂಯೋಜಕ ರಘುನಂದನ್ ಬೋಗದಿ ಅವರು ಮಾತನಾಡಿ, `ಹಿಂದೂ ಎಂಬುದು ಕೇವಲ ಒಂದು ಜಾತಿ, ಮತ, ಪಂಥ ಅಥವಾ ಮಠವಲ್ಲ; ಅದು ವಿಸ್ತೃತ ಮತ್ತು ಶ್ರೇಷ್ಠವಾದ ಚಿಂತನೆ, ತಾತ್ವಿಕ ಭಾವನೆ ಹಾಗೂ ಕೃತಿಯ ಸಂಕಲನವಾಗಿರುವ ಜೀವನ ಶೈಲಿ’ ಎಂದು ಹೇಳಿದರು.

ಹಿಂದುತ್ವವು ವ್ಯಕ್ತಿಯ ಆತ್ಮವಿಕಾಸಕ್ಕೆ ಮಾರ್ಗ ತೋರಿಸುವುದμÉ್ಟೀ ಅಲ್ಲದೆ, ಅಂತಿಮವಾಗಿ ಜಗತ್ತಿನ ಕಲ್ಯಾಣವನ್ನೇ ಗುರಿಯನ್ನಾಗಿರಿಸಿಕೊಂಡಿದೆ ಎಂದು ಅವರು ಹೇಳಿದರು. ರಘುನಂದನ್ ಮುಂದುವರಿದು, ಧರ್ಮವೆಂದರೆ ಪುಣ್ಯ–ಪಾಪಗಳ ವಿವರಣೆ ಮಾತ್ರವಲ್ಲ, ಸತ್ಯ, ಮೌಲ್ಯ, ನೀತಿ, ಸಜ್ಜನತೆ ಮತ್ತು ಕರ್ತವ್ಯ ಪಾಲನೆಯಿಂದ ಕೂಡಿದ ಸತ್ಯಾನ್ವೇಷಣೆಯ ಮಾರ್ಗಯಾತ್ರೆ ಎಂದು ವ್ಯಾಖ್ಯಾನಿಸಿದರು. ಭಾರತ ಎಂದರೆ ‘ಸತ್ಯಾನ್ವೇಷಣೆಯ ನಾಡು’ ಎಂದು ಸಾರಿದರು. ಸೇವೆ, ಸುಸಂಸ್ಕಾರ, ಶ್ರದ್ಧೆ, ವರ್ತಮಾನದಲ್ಲಿ ನೈತಿಕತೆ, ನಿಸ್ವಾರ್ಥ ತ್ಯಾಗ—ಇವುಗಳೇ ವ್ಯಕ್ತಿ, ಸಮಾಜ ಹಾಗೂ ರಾಷ್ಟ್ರದ ಬಲವರ್ಧಕ ಅಂಶಗಳು ಎಂದು ಹೇಳಿದರು.

ಕೇಶವ ಕಾರ್ಯ ಸಂವರ್ಧನ ಸಮಿತಿಯ ಕಾರ್ಯದರ್ಶಿ ಎನ್. ಕೃμÁ್ಣರೆಡ್ಡಿ, ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಆಡಳಿತ ಮಂಡಳಿ ಸದಸ್ಯ  ನಾರಾಯಣರಾವ್ ಮುಖೇಡ್ಕರ್, ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಪೆÇ್ರ ಎಸ್.ಬಿ. ¸ಜ್ಜನಶೆಟ್ಟಿ, ಕಾರ್ಯದರ್ಶಿ ಹನುಮಂತ್‍ರಾವ್ ಪಾಟೀಲ್, ಉಪಾಧ್ಯಕ್ಷ ನಾಗೇಶ್ ರೆಡ್ಡಿ, ಹಾಗೂ ಸಂಸ್ಥೆಯ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಪ್ರತಿಭಾ ತೇಲಿ ನಿರೂಪಿಸಿದರು. ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಹ ಕಾರ್ಯದರ್ಶಿ  ಪೀರಪ್ಪ ಔರಾದೆ ಸ್ವಾಗತಿಸಿದರು. ಚೆನ್ನಮ್ಮ ಪಾಂಚಾಳ್ ದೇಶಭಕ್ತಿ ಗೀತೆ ಹೇಳಿದರು, ಮುಖ್ಯಶಿಕ್ಷಕಿ ಅರ್ಚನಾ ಸಿರಿಗೆರೆ ವಂದಿಸಿದರು.

Share This Article

You cannot copy content of this page