Ad imageAd image

ಋಷಿ-ಮುನಿಗಳು ನೀಡಿದ ಜ್ಞಾನವೇ ದೇಶದ ನಿಜವಾದ ಸಂಪತ್ತು

Kannada Bimba Team
1 Min Read
ಬೀದರ್ ನಗರದ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ದೀಪ ಪೂಜನ ಕಾರ್ಯಕ್ರಮದಲ್ಲಿ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಹಕಾರ್ಯದರ್ಶಿ ಪೀರಪ್ಪ ಔರಾದೆ ಮಾತನಾಡಿದರು.

 

ಕನ್ನಡ ಬಿಂಬ, ಬೀದರ್

 

ಋಷಿ-ಮುನಿಗಳು ನೀಡಿದ ಜ್ಞಾನವೇ ದೇಶದ ನಿಜವಾದ ಸಂಪತ್ತು ಎಂದು ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಹ ಕಾರ್ಯದರ್ಶಿ ಪೀರಪ್ಪ ಔರಾದೆ ಹೇಳಿದರು.

ಬೀದರ್ ನಗರದ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ದೀಪಪೂಜನ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತವು ಸಂಸ್ಕøತಿಯ ಮಹಾನ್ ಪರಂಪರೆಯನ್ನು ಹೊಂದಿದ ರಾಷ್ಟ್ರವಾಗಿದೆ ಎಂದು ಅವರು ಬಣ್ಣಿಸಿದರು.

ದೀಪವು ಅಂಧಕಾರವನ್ನು ದೂರ ಮಾಡಿ ಜ್ಞಾನವೆಂಬ ಬೆಳಕನ್ನು ಹರಡುವ ಸಂಕೇತ. ಮನೆಯೇ ಮೊದಲ ಪಾಠಶಾಲೆ, ಮಾತೆಯೇ ಮೊದಲ ಗುರು. ಸಮಾಜಕ್ಕೆ ಒಳ್ಳೆಯ ಪ್ರಜೆಗಳನ್ನು ರೂಪಿಸುವುದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು ಎಂದು ಪೀರಪ್ಪ ಔರಾದೆ ಹೇಳಿದರು.

ದೇಶದ ಪ್ರಗತಿಗಾಗಿ ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಿಸಬೇಕು. ಕುಟುಂಬ ಸಾಮರಸ್ಯವನ್ನು ಕಾಪಾಡಿ, ನಾವು ಎಲ್ಲರೂ ಒಂದೇ ಎಂಬ ಭಾವನೆ ಬೆಳೆಸಬೇಕು ಎಂದು ಅವರು ಸಲಹೆ ನೀಡಿದರು.

ಆಶೀರ್ವಚನ ನೀಡಿದ ನಗರದ ಸಿದ್ದಾರೂಢ ಮಠದ ಸಂಗೀತಾ ಮಾತಾಜಿ ಅವರು, ಭಾರತದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಶಾಲೆಗಳ ಕರ್ತವ್ಯ. ಮಕ್ಕಳಲ್ಲಿ ಸಂಸ್ಕಾರಗಳನ್ನು ಬೆಳೆಸಲು ಪಾಲಕರು ಶ್ರಮಿಸಬೇಕು ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ  ಎಸ್. ಬಿ. ಸಜ್ಜನಶೆಟ್ಟಿ, ಉಪಾಧ್ಯಕ್ಷ ನಾಗೇಶ ರೆಡ್ಡಿ, ಕೋಶಾಧ್ಯಕ್ಷ ಎನ್. ಕೃಷಣಾರೆಡ್ಡಿ, ಆಡಳಿತ ಮಂಡಳಿಯ  ಸದಸ್ಯರಾದ ಶಿವಶರಣಪ್ಪ ಪಾಟೀಲ, ನಾರಾಯಣರಾವ್  ಮುಖೇಡ್ಕರ, ವೀರಶೆಟ್ಟಿ ಖ್ಯಾಮ ದಂಪತಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 422 ಕ್ಕೂ ಹೆಚ್ಚು ಮಾತೆಯರು ಭಾಗವಹಿಸಿದರು. ಸುಧಾ ಮೂಲಗೆ ಸ್ವಾಗತಿಸಿದರು. ವೈಯಕ್ತಿಕ  ಗೀತೆಯನ್ನು ಅಮೃತಾ ರಾಮೇಶ್ವರ ಸೋಲಂಕಿ  ಹಾಡಿದರು. ಸುಜಾತ ಶಾಂತಕುಮಾರ ವಂದಿಸಿದರು. ವೈಜಯಂತಿ  ಪ್ರಕಾಶ ನಿರೂಪಿಸಿದರು.

Share This Article

You cannot copy content of this page