
ಕನ್ನಡ ಬಿಂಬ, ಬೀದರ್
ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಬೀದರ್ ನಗರದ ನೆಹರು ಸ್ಟೇಡಿಯಂ ಹತ್ತಿರದ ಗುರುನಾನಕ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ರೂಬಿಕ್ಸ್ ಕ್ಯೂಬ್ ಪರಿಹಾರ ಸ್ಪರ್ಧೆಯಲ್ಲಿ ಗಿನ್ನೀಸ್ ವಿಶ್ವದಾಖಲೆ ಮಾಡಿದ್ದಾರೆ.
ಗುರುನಾನಕ ದೇವ್ ಎಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ ನವೆಂಬರ್ 9 ರಂದು ರೂಬಿಕ್ಸ್ ಕ್ಯೂಬ್ ಪರಿಹಾರ ಸ್ಪರ್ಧೆ ನಡೆಯಿತು. ಗುರುನಾನಕ ದೇವ್ ಪಬ್ಲಿಕ್ ಸ್ಕೂಲ್‍ನ 5434 ವಿದ್ಯಾರ್ಥಿಗಳು ಪಾಲ್ಗೊಂಡು, ರೂಬಿಕ್ಸ್ ಕ್ಯೂಬ್ ಸವಾಲನ್ನು ಯಶಸ್ವಿಯಾಗಿ ಎದುರಿಸಿದರು. ನಿಗದಿತ ಸಮಯದಲ್ಲಿ ಪರಿಹಾರ ಕಂಡುಕೊಂಡು ಗಿನ್ನಿಸ್ ವಿಶ್ವದಾಖಲೆ ಸ್ಥಾಪಿಸಿದರು.
2018 ರಲ್ಲಿ ಚೆನೈನ ಶಾಲೆಯ 3997 ಮಕ್ಕಳು ಪಾಲ್ಗೊಂಡು ಗಿನ್ನಿಸ್ ವಿಶ್ವದಾಖಲೆ ಸ್ಥಾಪಿಸಿದ್ದರು. ಗುರುನಾನಕ್ ಪಬ್ಲಿಕ್ ಸ್ಕೂಲ್‍ನ 5434 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಹೊಸ ವಿಕ್ರಮ ಸ್ಥಾಪಿಸಿದರು. ಗಿನ್ನಿಸ್ ವಿಶ್ವದಾಖಲೆಯ ಪ್ರತಿನಿಧಿ ಸ್ವಪ್ನಿಲ್ ಅವರು ಈ ಸ್ಪರ್ಧೆಯ ವೇಳೆ ಉಪಸ್ಥಿತರಿದ್ದರು. ಸವಾಲನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಅವರು ಅಧಿಕೃತವಾಗಿ ಪ್ರಕಟಿಸಿದರು.
ಗುರು ನಾನಕ ಪಬ್ಲಿಕ್ ಸ್ಕೂಲ್‍ನ ಅತಿ ಹೆಚ್ಚು ಅಂದರೆ, 5434 ವಿದ್ಯಾರ್ಥಿಗಳು ಭಾಗವಹಿಸುವವರೊಂದಿಗೆ ರೂಬಿಕ್ಸ್ ಕ್ಯೂಬ್ ಸವಾಲಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. 7 ವರ್ಷಗಳ ನಂತರ ಚೆನೈ ಶಾಲೆಯ ಗಿನ್ನಿಸ್ ವಿಶ್ವದಾಖಲೆಯನ್ನು ಗುರುನಾನಕ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಮುರಿದಿದ್ದಾರೆ. ಗುರು ನಾನಕ್ ಶಾಲಾ ವಿದ್ಯಾರ್ಥಿಗಳು ಮೊದಲ ಪ್ರಯತ್ನದಲ್ಲಿಯೇ ಸವಾಲನ್ನು ಯಶಸ್ವಿಯಾಗಿ ಎದುರಿಸಿ, ಅದರಲ್ಲಿ ಸಫಲತೆ ಪಡೆದಿದ್ದಾರೆ. ಇದೊಂದು ಹರ್ಷದ ಸಂಗತಿ ಎಂದು ಸ್ವಪ್ನಿಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ಗುರುನಾನಕ್ ಸಂಸ್ಥೆಯ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ್ ಅವರು ಮಾತನಾಡಿ, ಮೆಚ್ಚುಗೆ ವ್ಯಕ್ತಪಡಿಸಿದರು. ಸಮರ್ಪಣಾ ಮನೋಭಾವ ಹಾಗೂ ಎಲ್ಲರೂ ಒಂದು ತಂಡವಾಗಿ ಸವಾಲು ಎದುರಿಸಿದ್ದರಿಂದ ಜಾಗತಿಕ ದಾಖಲೆ ಸಾಧಿಸಲು ಸಾಧ್ಯವಾಯಿತು. ಇದಕ್ಕಾಗಿ ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ ಎಲ್ಲರನ್ನು ಅಭಿನಂದಿಸಲಾಗುತ್ತದೆ ಎಂದು ಹೇಳಿದರು.
ಶ್ರೀ ನಾನಕ ಝಿರಾ ಸಾಹೇಬ್ ಫೌಂಡೇಷನ್ ಅಧ್ಯಕ್ಷ ಡಾ. ಎಸ್.ಬಲಬೀರ್ ಸಿಂಗ್, ಎಸ್. ಪುನಿತ್ ಸಿಂಗ್, ಎಸ್. ಪವಿತ್ ಸಿಂಗ್, ಆಡಳಿತಾಧಿಕಾರಿ ಎಸ್.ಆರ್.ಡಿ.ಸಿಂಗ್, ಗುರು ನಾನಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


