
ಕನ್ನಡ ಬಿಂಬ, ಬೀದರ್
ಮುಂದಿನ ದಿನಗಳಲ್ಲಿ ಕರ್ನಾಟಕ ಸಾಹಸ ಕಲಾ ಶಿಕ್ಷಣ ಕೇಂದ್ರ ಹಾಗೂ ರಾಜಕುಮಾರ ಹೆಬ್ಬಾಳೆಯವರ ಸಹಕಾರದೊಂದಿಗೆ ಒಂದು ಸಾವಿರ ಜನರಿಗೆ ಸಾಂಪ್ರದಾಯಿಕ ಸಮರಕಲೆಯ ತರಬೇತಿ ನೀಡಿ ಅವರನ್ನು ಶಿಕ್ಷರನ್ನಾಗಿ ರೂಪಿಸುವ ಗುರಿ ಇದೆ ಎಂದು ಪದ್ಮಶ್ರೀ ಡಾ. ಹಾಸನ ರಘು ಇಲ್ಲಿ ಪ್ರಕಟಿಸಿದರು.
ಡಿಸೆಂಬರ್ 14 ರಂದು ಬೀದರ ನಗರದ ತೇಲಿ ಲೇಔಟ್ ನಲ್ಲಿರುವ ಅಲ್ಲೂರಿ ಸೀತಾರಾಮರಾಜು ಸಭಾಂಗಣದಲ್ಲಿ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ಬೀದರ ಹಾಗೂ ನವದೆಹಲಿಯ ಸಂಸ್ಕೃತಿ ಸಚಿವಾಲಯ ಸಂಯುಕ್ತಾಶ್ರದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಅಲ್ಲೂರಿ ಸೀತಾರಾಮರಾಜು ಸಭಾಂಗಣ ಉದ್ಘಾಟನೆ ಮತ್ತು ಕರ್ನಾಟಕ ಜಾನಪದ ಪರಿಷತ್ತು ಹಾಗೂ ತೆಲಂಗಾಣ ಭಾμÉ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಅಲ್ಲೂರಿ ಸೀತಾರಾಮರಾಜು ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಜಾನಪದ ಗೀತಗಾಯನ ಹಾಗೂ ನೃತ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
ಅನಕ್ಷರಸ್ಥರಿಗೆ ದಾರಿ ತೋರುವುದು ಬಲು ಮುಖ್ಯ. ಅವರಲ್ಲಿ ಕ್ರೀಡೆ, ಕಲೆಯ ಜ್ಞಾನ ಬಿತ್ತಬೇಕು. ನಮ್ಮ ಕರ್ನಾಟಕ ಸಾಹಸ ಕಲಾ ಶಿಕ್ಷಣ ಕೇಂದ್ರದಿಂದ 60 ಕ್ಕೂ ಹೆಚ್ಚು ಯುವಕರಿಗೆ ಮಲ್ಲಕಂಬದಂತಹ ಸಾಂಪ್ರದಾಯಿಕ ಸಮರಕಲೆಯ ತರಬೇತಿ ನೀಡಲಾಗುತ್ತಿದೆ. ಇದರಲ್ಲಿ 30 ವಿದ್ಯಾರ್ಥಿಗಳನ್ನು ದತ್ತು ಪಡೆಯಲಾಗಿದೆ. ಜಗನ್ನಾಥ ಹೆಬ್ಬಾಳ್ಳೆಯವರು ಸುಮಾರು ಮೂರು ದಶಕಗಳಿಂದ ಕಲೆ, ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ ಅವರಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಬೇಕು ಎಂದು ಹಾಸನ ರಘು ಹೇಳಿದರು.
ಸ್ವರ್ಣ ಕನ್ಸಟ್ರಕ್ಷನ್ ವ್ಯವಸ್ಥಾಪಕ ನಿರ್ದೇಶಕ ವೀರಶೆಟ್ಟಿ ಮಣಗೆ ಮಾತನಾಡಿ, ಕಲಾ ಪ್ರದರ್ಶನಕ್ಕೆ ಆಗಮಿಸುವ ಕಲಾವಿದರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಜಗನ್ನಾಥ ಹೆಬ್ಬಾಳೆ ಮುತುವರ್ಜಿ ವಹಿಸಿ ಸಭಾಂಗಣ ನಿರ್ಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ, ತಾಯಿಯವರ ಪ್ರಭಾವದಿಂದ ಭಾರತೀಯ ಸಾಹಿತ್ಯ, ಸಂಸ್ಕೃತಿ ಉಳಿಸುವ ಸೇವಾ ಕೈಂಕರ್ಯದಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ಸಮಾಜದಲ್ಲಿರುವ ಬಡವರಿಗೆ, ಕಲಾವಿದರಿಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಸಭಾಂಗಣ ನಿರ್ಮಾಣ ಮಾಡಿದ್ದೇವೆ. ಇದಕ್ಕೆ ಸಹಕಾರ ನೀಡಿದ ಸರ್ವರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಹಾಸನ ರಘು ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘದ ಸದಸ್ಯರು ಜಗನ್ನಾಥ ಹೆಬ್ಬಾಳೆ ದಂಪತಿಗಳಿಗೆ ಸನ್ಮಾನಿಸಿದರು. ವಿವಿಧ ತಂಡಗಳು ಜಾನಪದ ಗೀತಗಾಯನ ಹಾಗೂ ನೃತ್ಯ ಪ್ರದರ್ಶಿಸಿದವು.
ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಡಾ. ಸಾವಿತ್ರಿ ಹೆಬ್ಬಾಳೆ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ ಹೆಬ್ಬಾಳೆ, ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ, ಸಂಯೋಜಕ ಡಾ.ರಾಜಕುಮಾರ ಹೆಬ್ಬಾಳೆ, ಕೋಶಾಧ್ಯಕ್ಷ ವಿವೇಕ್ ಹೆಬ್ಬಾಳೆ, ಸಿದ್ದೇಶ್ವರ ಬೆಲ್ಲದ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಹೆಬ್ಬಾಳೆ, ಹಿರಿಯ ಸಂಗೀತಗಾರ ವೀರಭದ್ರಪ್ಪ ಗಾದಗಿ, ಶಿವರಾಜ್ ಸೂರೆ, ವೈಜೀನಾಥ್ ಕಮಠಾಣೆ, ಆಶೀಶ್ ಹೆಬ್ಬಾಳೆ, ಗುರುದೇವ್ ಗುರುಪ್ರಿಯಾ, ಸಂಜುಕುಮಾರ್ ಸ್ವಾಮಿ ಉಜನಿ, ರಾಣಿ ಸತ್ಯಮೂರ್ತಿ ಉಪಸ್ಥಿತರಿದ್ದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕಿ ಡಾ. ಮಹಾದೇವಿ ಹೆಬ್ಬಾಳೆ ಸ್ವಾಗತಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯದರ್ಶಿ ಡಾ. ಸುನಿತಾ ಕೂಡ್ಲಿಕರ್ ನಿರೂಪಿಸಿ ವಂದಿಸಿದರು.


