Ad imageAd image

ಶರಣ ಕಮ್ಮಟ: ಸಚಿವ ಖಂಡ್ರೆ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ

Kannada Bimba Team
2 Min Read
ಶರಣ ಕಮ್ಮಟ ಅನುಭವ ಮಂಟಪ ಉತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಪೂಜ್ಯರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು, ಪೂಜ್ಯ ಗುರುಬಸವ ಪಟ್ಟದ್ದೇವರು, ಶಿವಾನಂದ ಸ್ವಾಮೀಜಿ ಸನ್ಮಾನಿಸಿದರು. ಪೂಜ್ಯರು, ಗಣ್ಯರು ಇದ್ದರು.
ಶರಣ ಕಮ್ಮಟ ಅನುಭವ ಮಂಟಪ ಉತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಪೂಜ್ಯರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು, ಪೂಜ್ಯ ಗುರುಬಸವ ಪಟ್ಟದ್ದೇವರು, ಶಿವಾನಂದ ಸ್ವಾಮೀಜಿ ಸನ್ಮಾನಿಸಿದರು. ಪೂಜ್ಯರು, ಗಣ್ಯರು ಇದ್ದರು.

 

ಕನ್ನಡ ಬಿಂಬ, ಬಸವಕಲ್ಯಾಣ

 

ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪ ಬಸವಕಲ್ಯಾಣ ವತಿಯಿಂದ ನಡೆಯಲಿರುವ ಶರಣ ಕಮ್ಮಟ ಅನುಭವ ಮಂಟಪ ಉತ್ಸವದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಕಾರ್ಯಾಧ್ಯಕ್ಷರಾಗಿ ಶಸಕ ಶರಣು ಸಲಗರ್ ಅವರನ್ನು ಆಯ್ಕೆ ಮಾಡಲಾಗಿದೆ.

ಅನುಭವ ಮಂಟಪ ಅದ್ಯಕ್ಷರಾದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ಈಚೆಗೆ ಪೂರ್ವ ಸಿದ್ಧತಾ ಸಭೆ ನಡೆಯಿತು. ಪೂಜ್ಯ ಡಾ.ಶಿವಾನಂದ ಮಹಾಸ್ವಾಮಿಗಳು, ಪೂಜ್ಯ ಗುರುಬಸವ ಪಟ್ಟದ್ದೇವರು, ಡಾ.ಗಂಗಾಂಬಿಕಾ ಅಕ್ಕ ಪ್ರಭುದೇವ ಸ್ವಾಮಿಗಳು ಗೋರ್ಟಾ, ಶಿವಾನಂದ ಸ್ವಾಮಿಗಳು ಉಪಸ್ಥಿತರಿದ್ದರು.

ಸಚಿವ ಈಶ್ವರ ಖಂಡ್ರೆ ಮಾತನಾಡಿ, 45 ವರ್ಷಗಳಿಂದ ಬಸವಾದಿ ಶರಣರ ಚಿಂತನೆಗಳನ್ನು ಪ್ರಸಾರ ಮಾಡುವ ಉದ್ದೇಶದಿಂದ ಶರಣಕಮ್ಮಟ, ಅನುಭವಮಂಟಪ ಉತ್ಸವ ಅರ್ಥಪೂರ್ಣವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ಭಾಗದ ನಡೆದಾಡುವ ದೇವರಾದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ಶರಣ ಕಮ್ಮಟ ಆರಂಭಿಸಿದರು. ಬಸವಕಲ್ಯಾಣದ ಸಮಗ್ರ ಅಭಿವೃದ್ಧಿಗೆ ಶರಣ ಕಮ್ಮಟ ಕಾರ್ಯಕ್ರಮವೆ ಕಾರಣಿಭೂತವಾಗಿದೆ. ಪೂಜ್ಯ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ನೇತೃತ್ವದಲ್ಲಿ ಶರಣಕಮ್ಮಟ ಅನುಭವಮಂಟಪ ಉತ್ಸವ ಅತ್ಯಂತ ವೈಭವದಿಂದ ಸಾಗುತ್ತಿದೆ. ಈ ವರ್ಷವೂ ಎಲ್ಲರೂ ಒಗ್ಗೂಡಿ ಕಾರ್ಯಕ್ರಮ ಯಶಸ್ವಿಯಾಗಿ ಮಾಡೋಣ ಎಂದು ಹೇಳಿದರು.

ಸ್ವಾಗತ ಸಮಿತಿ ಕಾಯಾಧ್ಯಕ್ಷರಾದ ಶರಣು ಸಲಗರ, ವಿಜಯಸಿಂಗ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣ ಕಮಕನೂರು, ಬಾಬು ಹೊನ್ನಾ ನಾಯಕ, ಭಾರತೀಯ ಬಸವಬಳಗ ರಾಜ್ಯಾಧ್ಯಕ್ಷ ಬಾಬು ವಾಲಿ, ಜೈರಾಜ ಖಂಡ್ರೆ, ಬಸವರಾಜ ಬುಳ್ಳಾ, ಶಶಿಕಾಂತ ದುರ್ಗೆ, ಡಾ.ಎಸ್.ಬಿ.ದುರ್ಗೆ, ಕುಪೇಂದ್ರ ಪಾಟೀಲ, ಶಿವರಾಜ ಪಾಟೀಲ, ಡಾ.ಸೋಮನಾಥ ಯಾಳವಾರ, ಸಿದ್ಧಯ್ಯ ಕಾವಡಿಮಠ, ವಿಶ್ವನಾಥಪ್ಪ ಬಿರಾದಾರ, ಗುರುನಾಥ ಗಡ್ಡೆ, ರವಿ ಕೊಳಕೂರು, ಶಿವಕುಮಾರ ಬಿರಾದಾರ, ವಿಜಯಪ್ರಕಾಶ ಸದಾನಂದೆ, ಜಗನ್ನಾಥ ಬಿರಾದಾರ, ನಿರ್ಮಲಾ ಶಿವಣಕರ, ಮೀನಾಕ್ಷಿ ಬಿರಾದಾರ, ಲಕ್ಷ್ಮೀಬಾಯಿ ಪಾಟೀಲ ಸುಲೋಚನಾ ಗುದಗೆ, ಸುಮಿತ್ರಾ ದಾವಣಗಾವೆ ಕವಿತಾ ಸಜ್ಜನ, ಕವಿತಾ ರಾಜೋಳೆ, ಸವಿತಾ ಅಲಗುಡ, ಸೋನಾಲಿ ನೀಲಕಂಠೆ ಹಾಗೂ ಜಿಲ್ಲೆಯ ವಿವಿಧ ಬಸವಪರ ಸಂಘಟನೆಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿದರು. ನವಲಿಂಗ ನಿರೂಪಿಸಿದರು. ದೀಪಕ ಠಮಕೆ ವಂದಿಸಿದರು.

Share This Article

You cannot copy content of this page