
ಕನ್ನಡ ಬಿಂಬ ಬೀದರ್
ಬೀದರನ ಡಾ. ರವೀಂದ್ರ ಲಂಜವಾಡಕರ್ ರವರಿಗೆ ಕರ್ನಾಟಕ ಸರ್ಕಾರ,
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ 2025 ನೇ ಸಾಲಿನ `ಕನಕ ಯುವ ಪುರಸ್ಕಾರ’ ನಗರದ ಡಾ. ರವೀಂದ್ರ ಲಂಜವಾಡಕರ್ ಆಯ್ಕೆಯಾಗಿದ್ದಾರೆ.
ಮೂಲತ: ಭಾಲ್ಕಿ ತಾಲೂಕಿನ ಲಂಜವಾಡ ಗ್ರಾಮದವರಾದ ಲಂಜವಾಡಕರ್ ಅವರು ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ, ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ವಿಚಾರ ಸಂಕಿರಣ, ಕಾರ್ಯಾಗಾರ, ಕಮ್ಮಟ, ದಾಸ ಸಾಹಿತ್ಯ ಸೌರಭ ಹಾಗೂ ಮನೆ ಮನೆಗೆ ದಾಸ ಜ್ಯೋತಿ ಶೀರ್ಷಿಕೆಯಡಿಯಲ್ಲಿ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ದಾಸ ಸಾಹಿತ್ಯ ಪ್ರಸಾರ ಮತ್ತು ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ದಾಸ ಸಾಹಿತ್ಯ ಪರಿಷತ್ತಿನ ಖಜಾಂಚಿ, ಕಾರ್ಯಾಧ್ಯಕ್ಷರಾಗಿ ಎರಡು ಅಖಿಲ ಕರ್ನಾಟಕ ದಾಸ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದಾರೆ. ಸಮಾಜಮುಖಿ ದಾಸ ಸಾಹಿತ್ಯ (ಒಂದು ಅಧ್ಯಯನ) ಸಂಶೋಧನೆಗೆ ಡಾಕ್ಟರೇಟ್ ಪಡೆದಿದ್ದಾರೆ. ಸಮಾಜಮುಖಿ ದಾಸ ಸಾಹಿತ್ಯ ಹಾಗೂ ಕಣಿಯ ಹೇಳಲು ಬಂದೆ ಎಂಬ ಕೃತಿಗಳನ್ನು ರಚಿಸಿದ್ದಾರೆ.
ಈ ಸಾಲಿನ ಕನಕ ಯುವ ಪುರಸ್ಕಾರ ಪ್ರದಾನ ಸಮಾರಂಬ ದಿ. 8 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿಯವರು ಉದ್ಘಾಟಿಸುವರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಸೇರಿದಂತೆ ಗಣ್ಯರು, ಹಿರಿಯ ಅಧಿಕಾರಿಗಳು ಪಾಲ್ಗೊಳ್ಳುವರು.
ಕನಕ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿರುವ ರವೀಂದ್ರ ಲಂಜವಾಡಕರ್ ಅವರನ್ನು ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಮನೋಹರ ಸಿಂಗ್ ಪಾಟೀಲ್, ಮಹೇಬೂಬ ಉಸ್ತಾದ್, ಗಣೇಶ ಬಿರಾದಾರ, ನರಸಿಂಗ ಕುಲಕರ್ಣಿ, ಡಾ. ಸಂಜೀವಕುಮಾರ ಅತಿವಾಳೆ, ಡಾ. ಶಾಮರಾವ ನೇಲವಾಡೆ, ರಾಮಶೆಟ್ಟಿ ಐನೊಳ್ಳೆ, ಶಿವಶರಣ ಜಾಪಾಟೆ, ಸುಧಾಕರ ಮಹೇಂದ್ರಕರ, ಮಹೇಶ್ ಮೈಲೂರಕರ, ದಿನೇಶ್ ತಾಂದಳೆ ಹರ್ಷ ವ್ಯಕ್ತಪಡಿಸಿದ್ದಾರೆ.


