Ad imageAd image

ಬ್ರಿಮ್ಸ್ ಹಾಳಾಗಲು ಸಚಿವ ಈಶ್ವರ ಖಂಡ್ರೆ ಕಾರಣ: ಪಾಟೀಲ್

Kannada Bimba Team
3 Min Read
ಸೋಮನಾಥ ಪಾಟೀಲ್

 

ಕನ್ನಡ ಬಿಂಬ ಬೀದರ್

 

ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ಆಸ್ಪತ್ರೆ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಗಡಿ ಭಾಗದ ಜಿಲ್ಲಾ ಕೇಂದ್ರದಲ್ಲಿರುವ ಬ್ರಿಮ್ಸ್ ಆಸ್ಪತ್ರೆ ಇದೀಗ ಅಕ್ರಮ, ಭ್ರμÁ್ಟಚಾರ, ಅವ್ಯವಸ್ಥೆಯ ಗೂಡಾಗಿದೆ. ಮೊದಲ ಬಾರಿಗೆ ಬ್ರಿಮ್ಸ್ ಈ ಪರಿಯಾಗಿ ಹಳಿ ತಪ್ಪಿ ಹಾಳಾಗಲು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಅಸಡ್ಡೆ, ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್, ಶಾಸಕರಾದ ಪ್ರಭು ಚವ್ಹಾಣ್, ಶರಣು ಸಲಗರ್, ಡಾ.ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ದು ಪಾಟೀಲ್ ದೂರಿದ್ದಾರೆ.

 

ಬ್ರಿಮ್ಸ್ ವ್ಯವಸ್ಥೆ ಹಾಳಾಗಿದೆ. ಇಲ್ಲಿ ಭ್ರμÁ್ಟಚಾರ ಹೆಚ್ಚಾಗಿದೆ.  ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೂರು ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿನ ಅಂಶಗಳನ್ನು  ನೋಡಿದರೆ ಖಂಡ್ರೆ ಬ್ರಿಮ್ಸ್ ಆಸ್ಪತ್ರೆ ವಿಷಯದಲ್ಲಿ ಎμÉ್ಟೂಂದು ಅಸಹಾಯಕರಾಗಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತುಕೊಂಡು ಒಂದು ಆಸ್ಪತ್ರೆಯ ವ್ಯವಸ್ಥೆಯನ್ನು ಸರಿ ದಾರಿಗೆ ತರುವುದು ಸಾಧ್ಯವಾಗುತ್ತಿಲ್ಲ. ಇದು ಸಚಿವರ ವೈಫಲ್ಯತೆ ಹಾಗೂ ನಿಷ್ಕ್ರಿಯತೆಯನ್ನು ಸಾಬೀತುಪಡಿಸಿದೆ ಎಂದು ಸೋಮನಾಥ ಪಾಟೀಲ್ ಹೇಳಿದ್ದಾರೆ.

 

ಈಶ್ವರ ಖಂಡ್ರೆ ಅವರು ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತು ಎರಡೂವರೆ ವರ್ಷವಾಗುತ್ತಿದೆ. ಈ ಮುಂಚೆ ಸಹ ಎರಡು ವರ್ಷ ಅವರು ಸಚಿವರಾಗಿದ್ದರು. ಜಿಲ್ಲೆಯಲ್ಲಿನ ಎಲ್ಲ ಆಗುಹೋಗು ಜವಾಬ್ದಾರಿ ಉಸ್ತುವಾರಿ ಸಚಿವರ ಹೆಗಲ ಮೇಲಿರುತ್ತದೆ. ಆದರೆ ಬ್ರಿಮ್ಸ್ ಆಸ್ಪತ್ರೆ ವಿಷಯದಲ್ಲಿ ಸಚಿವರು ನನ್ನಿಂದ ಏನೂ ಸಾಧ್ಯವಾಗುತ್ತಿಲ್ಲ. ನೀವೇ ಇದು ಸುಧಾರಿಸಿ ಎಂದು ವೈದ್ಯಕೀಯ ಶಿಕ್ಷಣ ಸಚಿವರಿಗೆ ಅಂಗಲಾಚಿರುವುದು ನೋಡಿದರೆ, ಬ್ರಿಮ್ಸ್ ಭ್ರಷ್ಟ ವ್ಯವಸ್ಥೆಯ ಮುಂದೆ ಸಚಿವ ಖಂಡ್ರೆಯವರು ಮಂಡಿಯೂರಿದ್ದರೆಯೇ ಎಂಬ ಅನುಮಾನ ಮೂಡುತ್ತದೆ ಎಂದು ಸೋಮನಾಥ ಪಾಟೀಲ್ ಟೀಕಿಸಿದ್ದಾರೆ.

 

750 ಹಾಸಿಗೆ ಸಾಮಥ್ರ್ಯದ ಬ್ರಿಮ್ಸ್ ಆಸ್ಪತ್ರೆ ಬಗ್ಗೆ ಸಾರ್ವಜನಿಕರು, ರೋಗಿಗಳಿಂದ ನಿರಂತರವಾಗಿ ದೂರು ಬರುತ್ತಿವೆ. ಮಾಧ್ಯಮಗಳಲ್ಲಿ ಸತತವಾಗಿ ಈ ಬಗ್ಗೆ ಸುದ್ದಿಗಳು ಬರುತ್ತಿವೆ. ಇಡೀ ಸರ್ಕಾರದ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ನಿಟ್ಟಿನಲ್ಲಿ ಬ್ರಿಮ್ಸ್ ವ್ಯವಸ್ಥೆ ಹಾಳಾಗಿದೆ. ಖುದ್ದು ಸಚಿವ ಖಂಡ್ರೆ ಅವರು ಸಹ ವೈದ್ಯಕೀಯ ಶಿಕ್ಷಣ ಸಚಿವರಿಗೆ ಬರೆದಿರುವ ಪತ್ರದಲ್ಲಿ ಬ್ರಿಮ್ಸ್ ನಿತ್ಯ ಒಂದಿಲ್ಲೊಂದು ವಿವಾದಕ್ಕೆ  ಸಿಲುಕುತ್ತಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವನಾಗಿರುವ ನನಗೆ ಮುಜುಗರಕ್ಕೆ ಸಿಲುಕಿಸುವಂತೆ ಮಾಡಿದೆ ಎಂದು ಹೇಳಿದ್ದಾರೆ. ಹಾಗಾದರೆ ಈ ಮುಜುಗರದ ಪರಿಸ್ಥಿತಿ ನಿರ್ಮಾಣ ಆಗುವವರೆಗೆ ನೀವು ಯಾಕೆ ಸುಮ್ಮನಿದ್ದಿರಿ ಎಂದು ಸೋಮನಾಥ ಪಾಟೀಲ್ ಪ್ರಶ್ನಿಸಿದ್ದಾರೆ.

 

ವೈದ್ಯಕೀಯ ಶಿಕ್ಷಣ ಸಚಿವರಿಗೆ ಪತ್ರ ಬರೆದ ಮಾತ್ರಕ್ಕೆ ಸಚಿವ ಕೆಲಸ ಮುಗಿಯುತ್ತದೆಯೇ ? ಹಾಗಾದರೆ ಜಿಲ್ಲೆಗೆ ಉಸ್ತುವಾರಿ ಸಚಿವರು ಏಕೆ ಬೇಕು? ಆಸ್ಪತ್ರೆಯಲ್ಲಿ ಸಮಸ್ಯೆ ಇದ್ದರೆ ತಕ್ಷಣ ಅದಕ್ಕೆ ಸರ್ಜರಿ ಮಾಡಿ ಜನಹಿತ, ರೋಗಿಗಳ ಹಿತ ಕಾಪಾಡುವುದು ಅವರ ಹೊಣೆ ಎಂದು ಸೋಮನಾಥ ಪಾಟೀಲ್ ತಿಳಿಸಿದ್ದಾರೆ.

 

ಬ್ರಿಮ್ಸ್ ಆಸ್ಪತ್ರೆಯಲ್ಲಿ ನೇಮಕ ಮಾಡುವಾಗ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅಕ್ರಮ ನಡೆದಿದೆ ಎಂದು ಸ್ವತ: ಸಚಿವರೇ ಹೇಳಿದ್ದಾರೆ. ಹಾಗಾದರೆ ನೇಮಕಾತಿ ನಡೆಯುವ ಮುನ್ನ ಯಾಕೆ ಗಮನ ಹಿರಿಸಿಲ್ಲ. ಜನರ ಹಿತದಿಂದ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಜಿಲ್ಲೆಯ ಪ್ರತಿಯೊಂದು ಇಲಾಖೆ, ಸಂಸ್ಥೆ ಉಸ್ತುವಾರಿಯನ್ನು  ನೋಡಬೇಕಾಗುತ್ತದೆ. ಸಚಿವರು ಇದರ ಬಗ್ಗೆ ಗಂಭೀರತೆ ಪ್ರದರ್ಶಿಸಿಲ್ಲ, ಜಿಲ್ಲಾಡಳಿತವೂ ಕೇರ್ ಮಾಡಿಲ್ಲ. ಹೀಗಾಗಿ ನಿತ್ಯ ಇಲ್ಲಿ ದೂರು, ಆರೋಪಗಳು ಸಾಮಾನ್ಯವಾಗಿವೆ ಎಂದು ಹೇಳಿದ್ದಾರೆ.

 

ಈ ಭಾಗದ ಹೃದಯ ರೋಗಿಗಳಿಗೆ ವರದಾನ ಆಗಬೇಕಾದ ಕ್ಯಾಥ್ ಲಾಬ್ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಮಾಡಲಾಗಿದೆ. ಇದರ ಉದ್ಘಾಟನೆ ಮುಖ್ಯಮಂತ್ರಿ ಕೈಯಿಂದಲೇ ಮಾಡಿಸಲಾಗಿದೆ. ಆದರೆ ಈವರೆಗೆ ಇದು ಆರಂಭವಾಗಿಲ್ಲ. ಬಹುತೇಕ ಪೀಠೋಪಕರಣ ತುಕ್ಕು ಹಿಡಿಯುತ್ತಿವೆ. ಹೃದ್ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗಿ ಹೈರಾಣಾಗುತ್ತಿದ್ದಾರೆ. ಬಡವರು ಹಣವಿಲ್ಲದೆ ಜೀವವೇ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಆದರೆ ಇಲ್ಲಿ ಕ್ಯಾಥ್ ಲ್ಯಾಬ್ ಆರಂಭ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 

ಮಳೆ ಬಂದರೆ ಬ್ರಿಮ್ಸ್ ಆಸ್ಪತ್ರೆ ನೆಲಮಹಡಿ ಸಂಪೂರ್ಣ ನೀರಿನಿಂದ ತುಂಬುತ್ತದೆ. ಇತ್ತೀಚೆಗೆ ಅತಿವೃಷ್ಟಿಯಾದಾಗ ಸುಮಾರು ಒಂದು ತಿಂಗಳು ನೆಲಮಹಡಿ ನೀರಿನಲ್ಲೇ ಇತ್ತು. ಇದರಿಂದ ಬಹುಮಹಡಿ ಕಟ್ಟಡದ ಬುನಾದಿ ಹಾಳಾಗುವ ಆತಂಕವಿದೆ. ಸುಮಾರು 125 ಕೋಟಿ ರೂ.ಖರ್ಚು ಮಾಡಿ ಬ್ರಿಮ್ಸ್ ಆಸ್ಪತ್ರೆ ಕಟ್ಟಡ ಕಟ್ಟಲಾಗಿದೆ. ಇಪ್ಪತ್ತು ವರ್ಷದೊಳಗಡೆಯೇ ಕಟ್ಟಡದ ಬಹುತೇಕ ಕಡೆ ಲಿಕೇಜ್ ಶುರುವಾಗಿವೆ. ಅನೇಕ ಕಡೆ ಬಿರುಕು ಕಾಣಿಸುತ್ತಿವೆ. ಕಳಪೆ ಕಾಮಗಾರಿ ಸಹ ನಡೆದಿರುವುದು ಕಾಣುತ್ತಿದ್ದು, ಈ ಬಗ್ಗೆ ತನಿಖೆ ನಡೆಸುವ ಜೊತೆಗೆ ಎಲ್ಲ ನಿರ್ವಹಣೆ ಕೆಲಸ ತಕ್ಷಣ ಗುತ್ತಿಗೆ ಸಂಸ್ಥೆಯಿಂದ ಮಾಡಿಸಿ ಮುಂದಾಗುವ ಅನಾಹುತಗಳು ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

 

Share This Article

You cannot copy content of this page