
ಕನ್ನಡ ಬಿಂಬ, ಬೀದರ್
ಜಿಲ್ಲೆಯ ಸಾವಿರಾರು ಮಕ್ಕಳು ಡಾಕ್ಟರ್, ಎಂಜಿನೀಯರ್ ಆಗಲು ತಳ ಮಟ್ಟದಿಂದ ಸಹಾಯ ಮಾಡಿ, ಹಿಂದುಳಿದ ಕ್ಷೇತ್ರವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಿದ ಶಿಕ್ಷಣ ತಜ್ಞ, ಶಾಹೀನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರ ಅಭಿನಂದನಾ ಸಮಾರಂಭ ದಿ. 4 ರಂದು ಮಧ್ಯಾಹ್ನ 3 ಕ್ಕೆ ನಗರದ ಡಾ. ಚೆನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ನಡೆಯಲಿದೆ.
ಶಿಕ್ಷಣ ಕ್ಷೇತ್ರದಲ್ಲಿನ ಕೊಡುಗೆಯನ್ನು ಪರಿಗಣಿಸಿ ಈಚೆಗೆ ಅಲಿಗಡ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಡಾ. ಅಬ್ದುಲ್ ಖದೀರ್ ಅವರು ಸರ್ ಸಯ್ಯದ್ ರಾಷ್ಟ್ರೀಯ ಶ್ರೇಷ್ಠತಾ ಪ್ರಶಸ್ತಿ ನೀಡಿದ ಹಿನ್ನೆಲೆಯಲ್ಲಿ ಈ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ, ಡಾ. ಅಬ್ದುಲ್ ಖದೀರ್ ಅಭಿನಂದನಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಶ ಚೆನಶೆಟ್ಟಿ ತಿಳಿಸಿದ್ದಾರೆ.
ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು, ಪೂಜ್ಯ ಡಾ. ಸಿದ್ದರಾಮ ಶರಣರು ಬೆಲ್ದಾಳ, ಡಾ. ಗಂಗಾಂಬಿಕಾ ಅಕ್ಕ, ಪೂಜ್ಯ ಮಹ್ಮದ ತಸದುಕ ನದವಿ, ಜಮಿಯತುಲ್ ಉಲ್ಮಾ ಅಧ್ಯಕ್ಷ ಮೌಲಾನಾ ಅಬ್ದುಲ್ ಗನಿ ಖಾನಸಾಬ್, ಪೂಜ್ಯ ಜ್ಞಾನಸಾಗರ ಭಂತೆ, ಫಾದರ್ ವಿಲ್ಸನ್ ಮತ್ತಿತರ ಪೂಜ್ಯರ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯುವುದು. ಪೌರಾಡಳಿತ ಸಚಿವ ರಹೀಂ ಖಾನ್ ಅಧ್ಯಕ್ಷತೆ ವಹಿಸುವರು. ಕರಾಶಿ ಸಂಸ್ಥೆ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅಧ್ಯಕ್ಷತೆ ವಹಿಸುವರು. ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಪೆÇ್ರ ಸಿದ್ರಾಮಪ್ಪ ಮಾಸಿಮಾಡೆ, ಡಾ.ಮಕ್ಸೂದ್ ಚಂದಾ, ಡಾ. ಬಲಬೀರಸಿಂಗ್, ಡಾ ರಜನೀಶ ವಾಲಿ, ಶರಣಪ್ಪ ಸಿಕೆನಪೂರ, ರೇವಣಸಿದ್ದಪ್ಪ ಜಲಾದೆ ಮತ್ತಿತರ ಗಣ್ಯರು ಪಾಲ್ಗೊಳ್ಳುವರು.


