Ad imageAd image

ಚೆಸ್ ನಿಂದ ಏಕಾಗ್ರತೆ, ಬುದ್ಧಿಮತ್ತೆ ಹೆಚ್ಚಳ : ಬೆಲ್ದಾಳೆ

Kannada Bimba Team
2 Min Read

 

ಕನ್ನಡ ಬಿಂಬ, ಬೀದರ್

ಬೀದರ್  ಚೆಸ್ ಅಸೋಶಿಯೇಶನ್ ಹಾಗೂ ರೋಟರಿ ಕ್ಲಬ್  ಆಫ್  ಬೀದರ್  ನ್ಯೂ ಸೆಂಚ್ಯುರಿ ಸಹಯೋಗದಲ್ಲಿ ನಗರದ ಶಿವನಗರದಲ್ಲಿರುವ ರಾಮ ಸಮರ್ಥ ಫಂಕ್ಷನ್ ಹಾಲ್‍ ನಲ್ಲಿ  ಜನೆವರಿ 18ರಂದು ಅಂತಾರಾಜ್ಯ ಮುಕ್ತ ಚೆಸ್ ಪಂದ್ಯಾವಳಿ ನಡೆಯಿತು.

ವಿದ್ಯಾರ್ಥಿಗಳು ಹಾಗೂ 80 ವರ್ಷದೊಳಗಿನ ಹಿರಿಯ ನಾಗರಿಕರಿಗೆ ಮುಕ್ತವಾಗಿದ್ದ ಈ ಪಂದ್ಯಾವಳಿಯನ್ನು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಉದ್ಘಾಟಿಸಿದರು. ಚೆಸ್ ಆಟವು ವಿದ್ಯಾರ್ಥಿಗಳ ಬುದ್ಧಿಮತ್ತೆಯನ್ನು ಹೆಚ್ಚಿಸುವುದರ ಜೊತೆಗೆ ಏಕಾಗ್ರತೆಯನ್ನು ಜಾಗೃತಗೊಳಿಸುತ್ತದೆ. ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯ, ಜೀವನ ಕೌಶಲ್ಯ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಯಲು ಚದುರಂಗದಾಟ ನೆರವಾಗುತ್ತದೆ ಎಂದು ಶಾಸಕರು ಹೇಳಿದರು.

ಚೆಸ್ ಆಟವು ಮಾನವನ ಎಡ ಹಾಗೂ ಬಲ ಮೆದುಳುಗಳ ಮೇಲೆ ಸಮಾನವಾಗಿ ಉತ್ತಮ ಪರಿಣಾಮ ಬೀರುತ್ತದೆ. ಮೊಬೈಲ್‍ಗಳಿಗೆ ಮಾರುಹೋಗಿ ವಿಡಿಯೊ ಗೇಮ್‍ಗಳಲ್ಲಿ ಸಮಯ ವ್ಯರ್ಥ ಮಾಡುವುದಕ್ಕಿಂತ ಇಂತಹ ಬೌದ್ಧಿಕ ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರು ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಬೀದರ್ ರಾಮಕೃಷ್ಣ ವಿವೇಕಾನಂದಾಶ್ರಮದ ಸ್ವಾಮಿ ಜ್ಯೋತಿಮಯಾನಂದ ಅವರು ಸಾನಿಧ್ಯ ವಹಿಸಿ ಮಾತನಾಡಿದರು. ಕಳೆದ ವರ್ಷ ಜನೆವರಿ 12ರಂದು ಸ್ವಾಮಿ ವಿವೇಕಾನಂದರ ಜಯಂತಿ ದಿನದಂದು ಬೀದರ್ ಜನರ ಕೋರಿಕೆಯ ಮೇರೆಗೆ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಚೆಸ್ ಕೋಚಿಂಗ್ ಸೆಂಟರ್ ಆರಂಭಿಸಲಾಗಿದೆ. ಈ ಕೇಂದ್ರದಲ್ಲಿ ಪ್ರತಿ ಶನಿವಾರ ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಹಾಗೂ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ತರಬೇತಿ ನೀಡಲಾಗುತ್ತಿದೆ. ಬೇಸಿಗೆ ರಜಾದಿನಗಳಲ್ಲಿ ವಾರಪೂರ್ತಿ ಚೆಸ್ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುವುದು ಎಂದರು.

ಪಂದ್ಯಾವಳಿಯಲ್ಲಿ ಬೀದರ್ ಮಾತ್ರವಲ್ಲದೆ ಇತರ ಜಿಲ್ಲೆಗಳು ಹಾಗೂ ನೆರೆಹೊರೆಯ ರಾಜ್ಯಗಳಿಂದ ಒಟ್ಟು 328 ಸ್ಪರ್ಧಾಳುಗಳು ಪಾಲ್ಗೊಂಡಿದ್ದರು.

ಪಂದ್ಯಾವಳಿಯ ಅಧ್ಯಕ್ಷ ಡಾ. ಚಂದ್ರಕಾಂತ ಕುಲಕರ್ಣಿ, ಬೀದರ್ ಚೆಸ್ ಅಸೋಶಿಯೇಶನ್ ಅಧ್ಯಕ್ಷ ನಿತಿನ್ ಕರ್ಪೂರ್, ಕಾರ್ಯದರ್ಶಿ ಸತೀಶ ಸ್ವಾಮಿ, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚ್ಯುರಿ ಅಧ್ಯಕ್ಷ ನಾಗೇಶ ಪಾಟೀಲ, ರೋಟರಿಯನ್  ರಾಜಕುಮಾರ ಅಳ್ಳೆ, ಹಾವಶೆಟ್ಟಿ ಪಾಟೀಲ್,  ವಿಕ್ರಮ ತಗಾರೆ, ರಾಹುಲ್ ಅಟ್ಟಲ್, ಡಾ. ಮಲ್ಲಿಕಾರ್ಜುನ ಚಟನಳ್ಳಿ, ಡಾ. ರಘು ಕೃಷ್ಣಮೂರ್ತಿ, ಡಾ. ಆರತಿ ರಘು, ಸಚ್ಚಿದಾನಂದ ಚಿದ್ರೆ , ನಿತಿನ್ ಗೋಯಲ್,  ಶಾಹೀನ ಪಟೇಲ್,  ಗಜಾನನ ಡಿ. , ವಿಜಯಕುಮಾರ್ ಬಿರಾದಾರ್, ಪ್ರಭು ತಟಪಟ್ಟಿ, ಬಸವಾಂಜಲಿ ಎಂ. ಚಟನಳ್ಳಿ, ರೂಪಾಲಿ ಎನ್. ಕರ್ಪೂರ್, ಅನ್ನಪೂರ್ಣಾ ಎಸ್. ಸ್ವಾಮಿ, ತ್ರಿಶಾಲಾ ಶೆಟ್ಕಾರ್, ಶಿವಕುಮಾರ್, ಸುರೇಶ್ ಕುಮಾರ್ ಬಿರಾದಾರ್, ಶ್ರುತಿ,  ಅನುರಾಧಾ ತಟಪಟ್ಟಿ, ಡಾ. ಶ್ರುತಿ ವಿ. ಬಿರಾದಾರ್, ಶಿವಾನಿ ತಗಾರೆ, ಗೋಪಾಲಕೃಷ್ಣ ಕೆ. ಸೇರಿದಂತೆ ಅನೇಕ ಗಣ್ಯರು ಹಾಗೂ ಚೆಸ್ ಪ್ರೇಮಿಗಳು ಉಪಸ್ಥಿತರಿದ್ದರು.

 

Share This Article

You cannot copy content of this page